ಅಕ್ರಮ ಗಣಿಗಾರಿಕೆ ತನಿಖಾ ವರದಿಯು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರ ನೇತೃತ್ವದ ಲೋಕಾಯುಕ್ತ ಸಂಸ್ಥೆಯಿಂದ ೨೦೧೧ರ ಜುಲೈ ೨೭ರಂದು ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾದ ವರದಿ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಆರೋಪ ಇದ್ದಿದ್ದರಿಂದ ಅವರ ಪದತ್ಯಾಗಕ್ಕೆ ಕಾರಣವಾಯಿತು. == ಇತಿಹಾಸ == ೨೦೦೮ರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತನಿಖೆಗೆ ಆದೇಶ ನೀಡಿದ್ದರು. ಕರ್ನಾಟಕದ ಬೆಳ್ಳಾರಿಯು ಕಬ್ಬಿಣದ ಅದಿರಿಂನಿಂದ ಶ್ರಿಮಂತಗೊಂಡಿದೆ. ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. == ವರದಿಯ ಮುಖ್ಯಾಂಶಗಳು == ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಅವರಿಗೆ ಸೇರಿದ ಪ್ರೇರಣಾ ಎಜ್ಯುಕೇಷನ್ ಸೊಸೈಟಿಗೆ ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ದೇಣಿಗೆ.] ಎಚ್ ಡಿ ಕುಮಾರಸ್ವಾಮಿ ಅವರಿಂದ ಅಕ್ರಮವಾಗಿ ಅನುಮತಿ. ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಅವರಿಗೆ ಸೇರಿದ ಓಬಳಾಪುರಂ ಮೈನಿಂಗ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ.